ಕರ್ನಾಟಕ ರಾಜ್ಯೋತ್ಸವ -Karnataka Rajyotsava-Dept. of Kannada: 2021

November 1, 2021

2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದಿನಾಂಕ 28-10-2021 ರಿಂದ 31-10-2021ರವೆರಗೆ ನಡೆದ ಕಾರ್ಯಕ್ರಮಗಳ ವರದಿ

1)ದಿನಾಂಕ 28-10-2021 ರಂದು ಕಾಲೇಜಿನ ಬೋಧಕ/ಬೋಧಕೇತರ ವರ್ಗದವರಿಂದ ಕನ್ನಡ ನಾಡಿನ ವೈವಿಧ್ಯತೆಯನ್ನು ಸಾರುವ ಗೀತೆಗಳಾದ ರಾಷ್ಟ್ರಕವಿ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ, ನಿಸಾರ್ ಅಹಮದ್‍ರವರ ನಿತ್ಯೋತ್ಸವ ಹಾಡು, ಹಂಸಲೇಖರವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಮೂರು ಹಾಡುಗಳನ್ನು ಸಮೂಹ ಗಾನದಲ್ಲಿ ಹಾಡಲಾಯಿತು. ಹಾಗೂ ವೈಯಕ್ತಿಕವಾಗಿಯೂ ಕನ್ನಡ ನಾಡನ್ನು ಪ್ರತಿಧ್ವನಿಸುವ ಅನೇಕ ಹಾಡುಗಳನ್ನು ಹಾಡಲಾಯಿತು ಹಾಗೂ ವಿದ್ಯಾರ್ಥಿಗಳು ತಣ್ಣೀರುಬಾವಿಯಲ್ಲಿ ಸಮೂಹಗಾನದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿಯವರು ಕನ್ನಡ ನಾಡಿನ ಬಗ್ಗೆ ವ್ಯಾಖ್ಯಾನಿಸಿದರು. ವಿಮೆನ್ಸ್ ನ್ಯಾಷನಲ್ ಎಜ್ಯುಕೇಷನ್ ಸೊಸೈಟಿಯ ಕಾರ್ಯದರ್ಶಿ ಹಾಗೂ ಕಾಲೇಜಿನ ಸಂಚಾಲಕರಾದ ಶ್ರೀ ಕೆ. ದೇವಾನಂದ ಪೈ, ಹಾಗೂ ಬೆಸೆಂಟ್ ಸಂಧ್ಯಾ ಕಾಲೇಜಿನ ಸಂಚಾಲಕರಾದ ಶ್ರೀ ಬೆಳ್ತಂಗಡಿ ಗಣೇಶ್ ಕೃಷ್ಣ ಭಟ್ ಉಪಸ್ಥಿತರಿದ್ದರು. KannadaRajyotsava28Oct2021_(8).JPG

2) ದಿನಾಂಕ 29-10-2021 ರಂದು ಕಾಲೇಜಿನ ಬೋಧಕ/ಬೋಧಕೇತರ ವರ್ಗದವರಿಗೆ ಕನ್ನಡ ನಾಡಿಗೆ ಸಂಬಂಧಿಸಿದ ಕನ್ನಡ ಗೀತ ಗಾಯನÀ ಸ್ಪರ್ಧೆಗಳನ್ನು ಸಮೂಹಗಾನ ಮತ್ತು ವೈಯಕ್ತಿಕ ವಿಭಾಗದಲ್ಲಿ ಏರ್ಪಡಿಲಾಯಿತು. Kannada Rajyotsava_29Oct2021_  (8).jpg

3)ದಿನಾಂಕ 30-10-2021 ರಂದು ಕಾಲೇಜಿನ ಬೋಧಕ/ಬೋಧಕೇತರ ವರ್ಗದವರಿಗಾಗಿ ಕನ್ನಡ ನಾಡನ್ನು ಪ್ರತಿಬಿಂಬಿಸುವ ದೇಸಿಯ ಉಡುಪುಗಳ ಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಲಾಗಿತ್ತು. ಇದರಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ವಿವಿಧ ರೀತೀಯ ವೇಷ ಭೂಷಣವನ್ನು ಧರಿಸಿ ಕಾರ್ಯಕ್ರಮವನ್ನು ಮೆರುಗುಗೊಳಿಸಿದರು. Kannada Rajyotsava_29Oct2021_  (1).JPG

4) ದಿನಾಂಕ 31-10-2021 ರಂದು ಕನ್ನಡ ನಾಡು ನುಡಿ ಸಾಹಿತ್ಯವನ್ನು ಕುರಿತು ಆನ್‍ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಬೋಧಕರು/ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. 

ಈ ಎಲ್ಲಾ ಕಾರ್ಯಕ್ರಮಗಳನ್ನು ಕಾಲೇಜಿನ ಕನ್ನಡ ವಿಭಾಗದವರ ನೇತೃತ್ವದಲ್ಲಿ ನಡೆಸಲಾಯಿತು. ಸ್ಪರ್ಧೆಯಲ್ಲಿ  ಭಾಗವಹಿಸಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ನೀಡಿ ಗೌರವಿಸಲಾಯಿತು. 

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವನ್ನು  ಆಚರಿಸಲಾಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ಎಂ. ಪ್ರಭಾಕರ ಜೋಶಿಯವರು ವಹಿಸಿದ್ದರು. ಕನ್ನಡ ನಾಡಿನ ಹೆಮ್ಮೆ, ಕನ್ನಡ ಭಾಷೆ, ವೈವಿಧ್ಯತೆಯನ್ನು ತಮ್ಮ ನುಡಿಗಳಲ್ಲಿ ರಸವತ್ತಾಗಿ ವರ್ಣಿಸಿ, ಕನ್ನಡ ನಾಡಿನ ಕವಿಗಳ ಹಿರಿಮೆ ಗರಿಮೆಗಳನ್ನು ಕೊಂಡಾಡಿದರು. ಕಾಲೇಜಿನ ಪ್ರಾಂಶಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿ ಯವರು ಕನ್ನಡ ನಾಡಿನ ಬಗ್ಗೆ ಅರ್ಥವತ್ತಾದ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ  ಬೆಸೆಂಟ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀನಾರಾಯಣ್ ಭಟ್, ನ್ಯಾಕ್ ಸಂಯೋಜಕರಾದ ಡಾ. ಪ್ರವೀಣ್ ಕುಮಾರ್ ಕೆ.ಸಿ. ಮುಂತಾದವರು ಉಪಸ್ಥಿತರಿದ್ದರು. Kannada Rajyotsava_1Nov2021_ (5).JPG