ಸಾವಿರಾರು ವಿದ್ಯಾರ್ಥಿಗಳ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿರುವ ಬೆಸೆಂಟ್ ಮಹಿಳಾ
ಕಾಲೇಜು ದಿವಂಗತ ಮಣೇಲ್ ಶ್ರೀನಿವಾಸ ನಾಯಕರ ದೂರದೃಷ್ಟಿತ್ವದ ದೃಷ್ಟಿಕೋನದೊಂದಿಗೆ 1977
ರಲ್ಲಿ ಸ್ಥಾಪನೆಗೊಂಡಿತು. ನಂತರ ಮಣೇಲ್ ಶ್ರೀನಿವಾಸ ನಾಯಕರು ರಾಷ್ಟ್ರೀಯ ಮಹಿಳಾ ಶಿಕ್ಷಣ
ಸಂಸ್ಥೆಯ ಅಧ್ಯಕ್ಷ ಪದವಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಮುಂದಿನ ದಿನಗಳಲ್ಲಿ ಈ
ಶಿಕ್ಷಣ ಸಂಸ್ಥೆಯು ಅವರ ಉತ್ತರಾಧಿಕಾರಿಗಳಾದ ದಿವಂಗತ ದಾಮೋದರ ಪ್ರಭು ಮತ್ತು ದಿವಂಗತ
ಮಣೇಲ್ ಕೃಷ್ಣ ನಾಯಕ್ ಅವರ ಕ್ರಿಯಾಶೀಲ ನಾಯಕತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯಿತು.
ಶ್ರೇಷ್ಟ
ತತ್ವಜ್ಞಾನಿ ಮತ್ತು ಸಮಾಜ ಸುಧಾರಕಿ ಡಾ ಅನಿಬೆಸೆಂಟ್ ಅವರ ತತ್ತ್ವಾದರ್ಶದ ಅಡಿಯಲ್ಲಿ
ಮುನ್ನಡೆಯುತ್ತಿರುವ ನಮ್ಮ ಬೆಸೆಂಟ್ ಮಹಿಳಾ ಕಾಲೇಜು, ಮಹಿಳೆಯರಿಗೆ ಪ್ರತ್ಯೇಕವಾಗಿ
ಶಿಕ್ಷಣ ನೀಡುತ್ತಿರುವ ಜಿಲ್ಲೆಯ ಕೆಲವೇ ಕೆಲವು ಕಾಲೇಜುಗಳಲ್ಲಿ ಒಂದು. ಸಂಸ್ಥೆಯು
ಉನ್ನತ ಶಿಕ್ಷಣವನ್ನು ಅರಸುತ್ತಾ ಬರುವ ಎಲ್ಲಾ ಹೆಣ್ಣುಮಕ್ಕಳಿಗೆ, ಮುಖ್ಯವಾಗಿ
ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವಿಭಾಗದ ಹೆಣ್ಣುಮಕ್ಕಳಿಗೆ
ಶಿಕ್ಷಣವನ್ನು ಒದಗಿಸುವ ಮಹತ್ಕಾರ್ಯವನ್ನು ಮಾಡುತ್ತಾ ಬಂದಿದೆ. ಪ್ರಧಾನವಾಗಿ
ಪೂರ್ವಾಗ್ರಹಪೀಡಿತವಾಗಿ ಹೆಣ್ಮಕ್ಕಳ ವಿರುದ್ದವಾಗಿರುವ ಸಾಮಾಜಿಕ ವಾತಾವರಣವನ್ನು
ಬದಲಾಯಿಸುವ ಪ್ರಯತ್ನವನ್ನು ನಿರ್ವಹಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಕಾಲೇಜು
ಸಂಪೂರ್ಣವಾಗಿ ಹೆಣ್ಣುಮಕ್ಕಳಿಗೆ ಪ್ರೋತ್ಸಾಹಿಸುತ್ತಾ ಬಂದಿದೆ, ಅವರ ಆಯ್ಕೆಯ ಜೀವನವನ್ನು
ಪಡೆಯುವುದಕ್ಕೆ ಉತ್ತೇಜನ ನೀಡುತ್ತಾ ಬಂದಿದೆ.